: ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತೂಕ ಇಳಿಕೆಗಾಗಿ ನೀವೂ ಕೂಡ ಬಹುತೇಕ ಎಲ್ಲಾ ಪರಿಹಾರಗಳನ್ನು ಪ್ರಯತ್ನಿಸಿ. ಔಷಧಿ ತೆಗೆದುಕೊಂಡು, ವಿವಿಧ ಆಹಾರ ಕ್ರಮಗಳನ್ನು ಅನುಸರಿಸುತ್ತೀರಿ.
ಜಿಮ್ಮ್ ಕೂಡ ಮುಗಿದಿದ್ದು, ತೂಕ ಇನ್ನೂ ಇಳಿಕೆಯಾಗದೆ ಇದ್ದಲ್ಲಿ ಇಂದು ನಾವು ನಿಮಗಾಗಿ ಐದು ಅಭ್ಯಾಸಗಳನ್ನು ತಂದಿದ್ದು, ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು.
ಹಾಗಾದರೆ ಬನ್ನಿ ತೂಕ ಇಳಿಕೆಗಾಗಿ ಇರುವ ಆ ಐದು ಅಭ್ಯಾಸಗಳು ಯಾವುವು ಮತ್ತು ಅವು ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತವೆ ತಿಳಿದುಕೊಳ್ಳೋಣವೇ?
1. ಬೆಳಗಿನ ಉಪಾಹಾರವನ್ನು ತ್ಯಜಿಸುವುದು ಒಳ್ಳೆಯದೇ? : Is it good to skip breakfast?
ಬಹುತೇಕರು ತಮ್ಮ ಆಹಾರವನ್ನು ಮಿತಿಗೊಳಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಭಮ್ರೆಯಲ್ಲಿರುತ್ತಾರೆ. ಹಾಗಾಗಿಯೇ ತಮ್ಮ ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡುತ್ತಾರೆ. ವಾಸ್ತವವಾಗಿ, ಹೀಗೆ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.
ಇದರ ಪರಿಣಾಮ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀವು ಕಳೆದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಹಾಗಾಗಿ ಬೆಳಗಿನ ಉಪಹಾರವನ್ನು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡಿ.
2. ಸಾಕಷ್ಟು ನೀರು ಕುಡಿಯಿರಿ : Drink plenty of water
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ನೀರು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹೆಚ್ಚಾಗಿ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿ, ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.
ಹಾಗಾಗಿ ಇದು ಪರೋಕ್ಷವಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನೀವು ಅಧಿಕ ನಾರಿಶಾಂಶವಿರುವ ಆಹಾರವನ್ನು ಸೇವನೆ ಮಾಡುವುದರಿಂದ ಇದು ದೀರ್ಘ ಕಾಲಿಕವಾಗಿ ಹೊಟ್ಟೆಯನ್ನು ತುಂಬಿಸುತ್ತದೆ. ಇದರ ಪರಿಣಾಮ ನಿಮ್ಮ ಹಸಿವಿನ ಕಡು ಬಯಕೆಯನ್ನು ನಿಯಂತ್ರಿಸುತ್ತದೆ.
3. ಮಲಗಲು ಮತ್ತು ಏಳಲು ಸಮಯವನ್ನು ನಿಗದಿಪಡಿಸಿ : Set a time to sleep and wake up
ನೀವು ಚೆನ್ನಾಗಿ ನಿದ್ದೆ ಮಾಡಲು ಬಯಸಿದರೆ, ನಂತರ ಮಲಗುವ ಸಮಯವನ್ನು ಮತ್ತು ಏಳುವ ಸಮಯವನ್ನು ನಿಗದಿಪಡಿಸಿ. ನಮ್ಮ ಫಿಟ್ನೆಸ್ ಹೆಚ್ಚಾಗಿ ನಮ್ಮ ನಿದ್ರೆಗೆ ಸಂಬಂಧಿಸಿದೆ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಮೂಲಕ ನೀವು ಆರೋಗ್ಯವಂತರಾಗಬಹುದು.
ಇದರೊಂದಿಗೆ, ನಿಮ್ಮ ದೇಹದ ಜೈವಿಕ ಗಡಿಯಾರವು ಸರಿಯಾಗಿ ಉಳಿಯುತ್ತದೆ ಮತ್ತು ನೀವು ವ್ಯಾಯಾಮ ಮಾಡಲು ಶಕ್ತಿಯನ್ನು ಪಡೆಯುವಿರಿ.
4. ನಿಯಮಿತವಾಗಿ ವ್ಯಾಯಾಮ ಮಾಡಿ : Exercise regularly
ದಿನನಿತ್ಯ ಆಕ್ಟಿವ್ ಆಗಿರಿ. ಇದು ನಿಮ್ಮ ತೂಕ ಇಳಿಕೆಗೆ ಬಹಳಷ್ಟು ಪ್ರಯೋಜನವನ್ನು ಒದಗಿಸುತ್ತದೆ. ಕನಿಷ್ಟ ಪಕ್ಷ ದಿನಕ್ಕೆ 30 ನಿಮಿಷಗಳ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ಕೆಲವು ಕ್ಯಾಲೋರಿಗಳನ್ನು ನೀವು ಕಳೆದುಕೊಳ್ಳಬಹುದು. ರಾತ್ರಿಯ ಊಟದ ನಂತರ ಕನಿಷ್ಟ ಪಕ್ಷ 30 ನಿಮಿಷಗಳ ವಾಕಿಂಗ್ ಮಾಡುವುದನ್ನು ಮರೆಯದಿರಿ.
ವ್ಯಾಯಾಮ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ನೀವು ಪಾರಾಗಬಹುದು.
5. ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಿ : Consume plenty of fruits and vegetables
ನೀವು ತೂಕ ಇಳಿಸಿಕೊಳ್ಳಲು ಬಯಸುವುದಾದರೆ, ನಿಮ್ಮ ಆಹಾರದಲ್ಲಿ ಬುದ್ಧಿವಂತಿಕೆಯಿರಬೇಕು. ಒಂದು ದಿನದಲ್ಲಿ ಎಷ್ಟು ರೊಟ್ಟಿ ಮತ್ತು ಎಷ್ಟು ಅನ್ನವನ್ನು ತಿನ್ನಬೇಕು ಎಂಬುದರ ಬಗ್ಗೆ ವಿಶೇಷ ಗಮನ ಕೊಡಿ.
ಸಾದ್ಯವಾದಷ್ಟು ಹಗಲಿನಲ್ಲಿ ರೊಟ್ಟಿ ತಿನ್ನಲು ಪ್ರಯತ್ನಿಸಿ. ರಾತ್ರಿ ರೊಟ್ಟಿ ತಿನ್ನುವುದನ್ನು ತ್ಯಜಿಸಿ. ರಾತ್ರಿಯಲ್ಲಿ ರೊಟ್ಟಿ ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬೊಜ್ಜು ಕೂಡ ಹೆಚ್ಚಾಗುತ್ತದೆ.
ರಾತ್ರಿಯಲ್ಲಿ ರೊಟ್ಟಿ ಮತ್ತು ಅನ್ನ ಎರಡನ್ನೂ ತಿನ್ನುವುದರಿಂದ ನಿಮಗೆ ಅನಾನುಕೂಲವಾಗಬಹುದು. ಇದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಅನ್ನ ತಿಂದರೆ ಅನ್ನವನ್ನೇ ತಿನ್ನಿ. ಅದರೊಂದಿಗೆ ರೊಟ್ಟಿ ತಿನ್ನಬೇಡಿ. ಮತ್ತು ರಾತ್ರಿಯ ಊಟವನ್ನು ತುಂಬಾ ತಡ ಮಾಡದೆ ಬೇಗ ಸೇವಿಸಬೇಕು.